ಪ್ರಸ್ತುತ ಭಾರತೀಯ ನೌಕಾ ಸೇನೆಯ ಸೇವೆಯಲ್ಲಿರುವ ಐ.ಎನ್.ಎಸ್ ಜಲಾಶ್ವ ನೌಕೆಯು ಮೊದಲು ಯು.ಎಸ್.ಎಸ್ ಟ್ರೆಂಟಾನ್ ಎಂದು ಕರೆಯಲ್ಪಡುತ್ತಿತ್ತು. ಈ ನೌಕೆಯನ್ನು ಭಾರತವು ೪೮ ಮಿಲಿಯನ್ ಯು.ಎಸ್. ಡಾಲರ್'ಗಳಿಗೆ ಅಮೇರಿಕಾದಿಂದ ಖರೀದಿಸಿತು. ೨೦೦೭ರಲ್ಲಿ ಕಾರ್ಯಾರಂಭಿಸಿದ ಇದು ಭಾರತೀಯ ನೌಕಾ ಸೇನೆಯ ಎರಡನೆಯ ಬೃಹತ್ ನೌಕೆಯಾಗಿದೆ(ಐ.ಎನ್.ಎಸ್ ವಿರಾಟ್'ನ ನಂತರ). ವಿಶಾಖಪಟ್ಟಣದ ನೌಕಾ ನೆಲೆಗೆ ೧೨ ಸಪ್ಟಂಬರ್, ೨೦೦೭ರಂದು ಆಗಮಿಸಿದ ಇದು ಭಾರತೀಯ ನೌಕಾ ಸೇನೆಯ ಪೂರ್ವ ಅಂಗಕ್ಕೆ ಸೇರಿಸಲ್ಪಟ್ಟಿತು.